ಮೌಲ್ಯಾಧಾರಿತ ರಾಜಕಾರಣದ ಶ್ರೇಷ್ಠ ವ್ಯಕ್ತಿ ರಾಮಕೃಷ್ಣ ಹೆಗಡೆ: ಸಚಿವ ಬಸವರಾಜ ರಾಯರಡ್ಡಿ

1 ನಿಮಿಷ ಓದು · ನವೀಕರಿಸಲಾಗಿದೆ 14 ವೀಕ್ಷಣೆ
WhatsApp
ಮೌಲ್ಯಾಧಾರಿತ ರಾಜಕಾರಣದ ಶ್ರೇಷ್ಠ ವ್ಯಕ್ತಿ ರಾಮಕೃಷ್ಣ ಹೆಗಡೆ: ಸಚಿವ ಬಸವರಾಜ ರಾಯರಡ್ಡಿ

ರಾಮಕೃಷ್ಣ ಹೆಗಡೆ ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆದ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರಡ್ಡಿ

ರಾಮಕೃಷ್ಣ ಹೆಗಡೆ ಈ ದೇಶ ಕಂಡ ಅಪ್ರತಿಮ ಜನನಾಯಕ.

ರಾಜ್ಯದ ಹಣಕಾಸು ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರ ವಾಣಿಜ್ಯ ಸಚುವರಾಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ ಅನುಭವಿ ರಾಮಕೃಷ್ಣ ಹೆಗಡೆ ಎಂದರು.

ನಗರ ಮತ್ತು ಗ್ರಾಮೀಣ ಭಾಗದ ಜನರ ಅಭಿವೃದ್ದಿಗೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅಧಿಕಾರ ವಿಕೇಂದ್ರಿಕರಣ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದು ಎಲ್ಲರಿಗೂ ಅಧಿಕಾರ ನೀಡಿದರು. ಮುಂದೆ ದೇಶದಾದ್ಯಂತ ಪಂಚಾಯತ್ ರಾಜ್ ಜಾರಿಗೆ ಇದು ನಾಂದಿಯಾಯಿತು.

ಅವರೆಂದೂ ಜಾತಿ ರಾಜಕೀಯ ಮಾಡಿಲ್ಲ. ಎಲ್ಲ ಜಾತಿ, ಧರ್ಮದವರಿಗಾಗಿ ಕೆಲಸ ಮಾಡಿದರು. ಮೌಲ್ಯಾಧಾರಿತ ರಾಜಕಾರಣದ ನಿರ್ಮಾತೃವಾದರು. ಮೌಲ್ಯಾಧಾರಿತ ರಾಜಕಾರಣದ ಜನಕರೆಂದರೂ ತಪ್ಪಿಲ್ಲ. ಹೀಗೆ ರಾಮಕೃಷ್ಣ ಹೆಗಡೆ ಶ್ರೇಷ್ಠ ವ್ಯಕ್ತಿತ್ವದಿಂದ ಇತಿಹಾಸದಲ್ಲಿ ತಮ್ಮನ್ನು ದಾಖಲಿಸಿಕೊಂಡಿದ್ದಾರೆ.ಅವರ ಜನ್ಮಶತಮಾನೋತ್ಸವ ಆಚರಿಸುವ ಮೂಲಕ ರಾಮಕೃಷ್ಣ ಹೆಗಡೆಯವರನ್ನು, ಅವರ ಗುಣ, ಶ್ರೇಷ್ಠತೆಯನ್ನು ನೆನಪಿಸಿಕೊಳ್ಳಬೇಕಾಗಿದೆ.

ಸಮಿತಿ ಅಧ್ಯಕ್ಷರಾದ ಆರ್ ವಿ ದೇಶಪಾಂಡೆ, ಕಾರ್ಯಾಧ್ಯಕ್ಷರಾದ ಬಿ ಎಲ್ ಶಂಕರ ಹಾಗೂ ಇತರರು ಉಪಸ್ಥಿತರಿದ್ದರು.

ಜಾಹೀರಾತು
AdSense · in-feed

ಸಂಬಂಧಿತ ಲೇಖನಗಳು